ಸುಷ್ಮಾ ಕೃಷ್ಣಮೂರ್ತಿ ರಾವ್ (ಜನನ ಫೆಬ್ರವರಿ ೨೩, ೧೯೮೫) ಭಾರತೀಯ ನಟಿ, ನೃತ್ಯಗಾರ್ತಿ ಮತ್ತು ದೂರದರ್ಶನ ನಿರೂಪಕಿ. ನಟಿಯಾಗಿ ಅವರು ಕನ್ನಡ ಕಿರುತೆರೆಯಲ್ಲಿನ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಎಸ್. ನಾರಾಯಣ್ ಅವರ ಭಾಗೀರಥಿಯಲ್ಲಿ ಪಾದಾರ್ಪಣೆ ಮಾಡಿದ ನಂತರ, ಗುಪ್ತಗಾಮಿನಿ (ಧಾರಾವಾಹಿ)ಯ ಮೂಲಕ ಪ್ರಸಿದ್ಧಗೊಂಡರು. ಅವರು ಭರತನಾಟ್ಯ ನರ್ತಕಿಯಾಗಿದ್ದಾರೆ. 1997 ರಲ್ಲಿ ನೃತ್ಯಕ್ಕಾಗಿ ಆರ್ಯಭಟ ಪ್ರಶಸ್ತಿಯನ್ನು ಪಡೆದಿದ್ದಾರೆ. == ಜೀವನಚರಿತ್ರೆ == ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಎಂಬ ಊರಿನಲ್ಲಿ ೨೩ ಫೆಬ್ರವರಿ ೧೯೮೫ ರಲ್ಲಿ ಸುಷ್ಮಾ ಜನಿಸಿದರು. ಇವರ ಕುಟುಂಬದ ಬಗ್ಗೆ ಅಷ್ಟೇನು ವಿವರಗಳು ಇಲ್ಲ. ಸುಷ್ಮಾ ೨೦೦೭ರಲ್ಲಿ ಭಾರತೀಯ ಸಿನಿಮಾ ಚಿತ್ರಕಥೆಕಾರ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿಯನ್ನು ಮದುವೆಯಾಗುತ್ತಾರೆ. ಸುಮಾರು ಆರು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಇವರಿಬ್ಬರು ೨೦೧೩ರಲ್ಲಿ ವೈಯಕ್ತಿಕ ಕಾರಣಗಳಿಂದ ದೂರವಾಗುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಶಿಕ್ಷಣ ಅವರು ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾರೆ ಮತ್ತು ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಹೊಂದಿದ್ದಾರೆ. ಇವರು ತರಬೇತಿ ಪಡೆದ ಭರತನಾಟ್ಯ ನರ್ತಕಿಯಾಗಿದ್ದಾರೆ. ಅವರು ನವದೆಹಲಿ, ಮುಂಬೈ, ಜೈಪುರ ಮತ್ತು ತಿರುವನಂತಪುರಂ ಮತ್ತು ಹಂಪಿ ಉತ್ಸವದಲ್ಲಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ನೃತ್ಯದಲ್ಲಿ ಕರ್ನಾಟಕ ರಾಜ್ಯ ಮತ್ತು ಕೇಂದ್ರೀಯ ವಿದ್ಯಾರ್ಥಿವೇತನವನ್ನು () ಪಡೆದಿದ್ದಾರೆ. ಅವರು 1997 ರಲ್ಲಿ ನೃತ್ಯಕ್ಕಾಗಿ ಆರ್ಯಭಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. == ನಟನಾ ವೃತ್ತಿ == ನಟ ವಿಜಯ್ ಕಾಶಿ ಅವರು ಸುಷ್ಮಾ ಅವರಿಗೆ ನಟನೆಗೆ ಬರುವಂತೆ ಪ್ರೋತ್ಸಾಹಿಸುತ್ತಾರೆ. ಹೀಗೆ ಸುಷ್ಮಾ ತಮ್ಮ ದೂರದರ್ಶನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ, ನಟ ವಿಜಯ್ ಕಾಶಿ ಅವರ ಪತ್ನಿ ವೈಜಯಂತಿ ಕಾಶಿಯಲ್ಲಿ ಕೂಚಿಪುಡಿ ಕಲಿಯುತ್ತಿದ್ದರು. ಸುಷ್ಮಾ ಅವರು ಎಸ್. ನಾರಾಯಣ್ ಅವರ ಭಾಗೀರಥಿಯೊಂದಿಗೆ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು ಹೇಮಾ ಪ್ರಭಾತ್ ಅವರ ಪಾತ್ರದ ಸಹೋದರಿ ವೀಣಾ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ವಾತಿ ಮುತ್ತು ಚಿತ್ರದಲ್ಲಿ ಪಲ್ಲವಿಯಾಗಿ, ಬಿದಿಗೆ ಚಂದ್ರಮದಲ್ಲಿ ಶಶಿಕಲಾ ಪಾತ್ರದಲ್ಲಿ ಕಾಣಿಸಿಕೊಂಡರು. ಮೊದಲು ಯಾವ ಜನ್ಮದ ಮೈತ್ರಿಯಲ್ಲಿ ಅನನ್ಯಾಳಾಗಿ, ಗುಪ್ತಗಾಮಿನಿಯಲ್ಲಿ ಭಾವನಾ ಮತ್ತು ಸೊಸೆ ತಂದ ಸೌಭಾಗ್ಯದಲ್ಲಿ ಕೀರ್ತಿಯಾಗಿ ಕಾಣಿಸಿಕೊಂಡರು. ಸುಷ್ಮಾ ಅವರಿಗೆ ಗುಪ್ತಗಾಮಿನಿಯಲ್ಲಿನ ಅವರ ಅಭಿನಯಕ್ಕಾಗಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ​​​​ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಸೊಸೆ ತಂದ ಸೌಭಾಗ್ಯಕ್ಕಾಗಿ ಜೀ ಕನ್ನಡ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಯಿತು. == ನಿರೂಪಣೆ == ಇವರು ಹಲವಾರು ದೂರದರ್ಶನ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. == ದೂರದರ್ಶನ == == ಸಿನಿಮಾ == ಎಕ್ಸ್‌ಕ್ಯೂಸ್‌ಮಿ ಕನ್ನಡ ಸಿನಿಮಾದ ನಾಯಕಿ ಪಾತ್ರಕ್ಕೆ ಸುಷ್ಮಾರಿಗೆ ಅವಕಾಶ ನೀಡಲಾಯಿತು. ಆದರೆ, ನಾಯಕಿ ಪಾತ್ರಕ್ಕೆ ತುಂಬಾ ಗ್ಲಾಮರಸ್ ಬಟ್ಟೆಯನ್ನು ಧರಿಸಬೇಕಿದ್ದರಿಂದ ಈ ಪಾತ್ರ ಮಾಡುವುದನ್ನು ನಿರಾಕರಿಸಿದರು. == ಪ್ರಶಸ್ತಿಗಳು ಮತ್ತು ಗೌರವಗಳು == == ಉಲ್ಲೇಖಗಳು ==